Home
A Brief Overview about Hungund Town:
|
|
ಹುನಗುಂದ ಪಟ್ಟಣದ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಕರ್ನಾಟಕ ಸರಕಾರವು ಸಾರ್ವಜನಿಕರಿಗೆ ಸೇವೆಯನ್ನು ಕೂಡಲೇ ಒದಗಿಸುವ ಕರ್ನಾಟಕ ನಾಗರೀಕ ಸೇವಾ ಖಾತರಿ ಮಸೂದೆ-2011 ನ್ನು ದಿನಾಂಕ:02.04.2012 ರಿಂದ ಜಾರಿಗೊಳಿಸಿದೆ. ಈ ಸೇವೆಯು ಹುನಗುಂದ ಪಟ್ಟಣ ಪಂಚಾಯಿತಿಯಲ್ಲಿ ಲಭ್ಯವಿರುತ್ತದೆ. ಪ್ರಯುಕ್ತ ಸಾರ್ವಜನಿಕರು ಸೇವೆಗಳನ್ನು ನಿಗದಿಪಡಿಸಿದ ಅರ್ಜಿಯಲ್ಲಿ ಅರ್ಜಿ ಸಲ್ಲಿಸಿ ನಿಗಧಿತ ಸಮಯದಲ್ಲಿ ಸೇವೆಯನ್ನು ಪಡೆಯಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಗಣಕೀರಣ (Computerization of Records)
BIRTH AND DEATH: 1999 ರಿಂದ 2008 ಮತ್ತು 2010 (01.10.2010 )ರಿಂದ 2012 ರವರೆಗೆ ಜನನ ಮರಣ ದಾಖಲೆಗಳು ಆನ್-ಲೈನ್ ನಲ್ಲಿ ಲಭ್ಯವಿರುತ್ತವೆ. ಸಾರ್ವಜನಿಕರು ಪಟ್ಟಣ ಪಂಚಾಯಿತಿಯಲ್ಲಿ ಕಛೇರಿ ವೇಳೆಯಲ್ಲಿ ಜನನ ಮತ್ತು ಮರಣ ನೊಂದಣಿ ಪ್ರಮಾಣ ಪತ್ರಗಳನ್ನು ನಿಗದಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಲು ತಿಳಸಲಾಗಿದೆ. The Birth And Death Certificates from 1999 to 2008 , 2010 to 2012 are Available Online. Citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility.
GIS/ಭೌಗೋಳಿಕ ಮಾಹಿತಿ ತಂತ್ರಜ್ಞಾನ: ಪಟ್ಟಣ ಪಂಚಾಯಿತಿ ಹುನಗುಂದ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನ ಗುರುತಿಸಿ ಅವುಗಳ ವಿವರಗಳನ್ನು ಸಂಗ್ರಹಿಸಲಾಗಿದ್ದು, ಇವುಗಳ ಗಣಕೀರಣ ಕಾರ್ಯವು ಪ್ರಗತಿಯಲ್ಲಿರುತ್ತದೆ.ಶೀಘ್ರದಲ್ಲೇ ಸಾರ್ವಜನಿಕರಿಗೆ ಈ ಸೌಲಭ್ಯವು ಲಭ್ಯವಾಗಲಿದೆ. Properties within Hungund TP limits have been identified , details have been collected & computerization of records is under progress. Citizens can avail this facility to pay property tax shortly.
ಸಾರ್ವಜನಿಕ ಕುಂದು ಕೊರತೆ ನಿವಾರಣೆ ವಿಭಾಗ/ P.G.R: ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಘಟಕವನ್ನು ಸ್ಥಾಪಿಸಲಾಗಿದ್ದು, ವಾರದ 7 ದಿನಗಳು 12 ಘಂಟೆ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಪತ್ರ, ದೂರವಾಣಿ ಮತ್ತು ಆನ್ ಲೈನ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದಾಗಿದೆ. ತಮ್ಮ ದೂರುಗಳನ್ನು ಸಲ್ಲಿಸಲು ದೂರವಾಣಿ ಸಂಖ್ಯೆ 08351-260307 ನ್ನು ಬಳಸಬಹುದು.ತಮ್ಮ ದೂರುಗಳನ್ನು ಅಂತರ್ಜಾಲದ ಮೂಲಕ ನೋಂದಾಯಿಸಲು For Registering your Complaints By Online Click Here


This page is Maintained by Shri P.V.JALIHAL, Chief Officer Last Updated Dt. 18.04.2013"

